Viral Video : ಅಡುಗೆಮನೆಯಲ್ಲಿ ಹೆಬ್ಬಾವುಗಳ ಸರಸ! ವಿಡಿಯೋ ವೈರಲ್‌

Pythons Mating in Kitchen : ಮಹಿಳೆ ತನ್ನ ಅಡುಗೆಮನೆಗೆ ತೆರಳಿದ್ದಾರೆ. ಆಗ ಮೈಕ್ರೋವೇವ್ ಸರಿದಾಡುತ್ತಿರುವುದನ್ನು ಕಂಡಿದ್ದಾರೆ. ನಂತರ, ಹತ್ತಿರ ಹೋಗಿ ನೋಡಿದಾಗ ದೈತ್ಯ ಹಾವಿನ ಬಾಲ ನೇತಾಡುತ್ತಿರುವುದನ್ನು ನೋಡಿದ್ದಾರೆ. ಮೈಕ್ರೋವೇವ್‌ನ ಹಿಂದೆ ಎರಡು ಬೃಹದಾಕಾರದ ಹೆಬ್ಬಾವುಗಳ ಮಿಲನವನ್ನು ಕಂಡಿದ್ದಾರೆ.  

Written by - Chetana Devarmani | Last Updated : Dec 5, 2022, 12:35 PM IST
  • ಅಡುಗೆಮನೆಯಲ್ಲಿ ಹೆಬ್ಬಾವುಗಳ ಸರಸ
  • ಹೆಬ್ಬಾವುಗಳ ಮಿಲನ ಕಂಡು ದಂಗಾದ ಮಹಿಳೆ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Viral Video : ಅಡುಗೆಮನೆಯಲ್ಲಿ ಹೆಬ್ಬಾವುಗಳ ಸರಸ! ವಿಡಿಯೋ ವೈರಲ್‌  title=
ಹೆಬ್ಬಾವುಗಳ ಸರಸ

Pythons Mating in Kitchen : ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಮಹಿಳೆಯೊಬ್ಬರು ಅಡುಗೆಮನೆಯಲ್ಲಿ ಎರಡು ದೈತ್ಯ ಹೆಬ್ಬಾವುಗಳ ಮಿಲನ ಕಂಡು ಆಘಾತಗೊಂಡಿದ್ದಾರೆ. ಅಡುಗೆಮನೆಯಲ್ಲಿದ್ದ ಮೈಕ್ರೊವೇವ್ ಹಿಂದೆ ಎರಡು ಡೈತ್ಯ ಹೆಬ್ಬಾವುಗಳು ಅಡಗಿರುವುದನ್ನು ಮಹಿಳೆ ಗಮನಿಸಿದ್ದಾರೆ. ತಕ್ಷಣ ವೃತ್ತಿಪರ ಉರಗ ರಕ್ಷಕನನ್ನು ಕರೆಸಿದ್ದಾರೆ. ಕಿಚನ್ ಬೆಂಚ್‌ನಲ್ಲಿ ಎರಡು ಹೆಬ್ಬಾವುಗಳ ಮಿಲನದ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಲಾಗಿದ್ದು, ಎಲ್ಲೆಡೆ ವೈರಲ್‌ ಆಗುತ್ತಿದೆ.

ಇದನ್ನೂ ಓದಿ : Video : ದೈತ್ಯ ಹೆಬ್ಬಾವುಗಳನ್ನು ಹೆಗಲ ಮೇಲೆ ಹೊತ್ತು ಡ್ಯಾನ್ಸ್‌! ವಿಡಿಯೋ ವೈರಲ್

ಕ್ವೀನ್ಸ್‌ಲ್ಯಾಂಡ್‌ನ ಬುಡೆರಿಮ್‌ನಲ್ಲಿರುವ ಮಹಿಳೆ ತನ್ನ ಅಡುಗೆಮನೆಗೆ ತೆರಳಿದ್ದಾರೆ. ಆಗ ಮೈಕ್ರೋವೇವ್ ಸರಿದಾಡುತ್ತಿರುವುದನ್ನು ಕಂಡಿದ್ದಾರೆ. ನಂತರ, ಹತ್ತಿರ ಹೋಗಿ ನೋಡಿದಾಗ ದೈತ್ಯ ಹಾವಿನ ಬಾಲ ನೇತಾಡುತ್ತಿರುವುದನ್ನು ನೋಡಿದ್ದಾರೆ. ಮೈಕ್ರೋವೇವ್‌ನ ಹಿಂದೆ ಎರಡು ಬೃಹದಾಕಾರದ ಹೆಬ್ಬಾವುಗಳ ಮಿಲನವನ್ನು ಕಂಡಿದ್ದಾರೆ.  

ಮಹಿಳೆ ಸನ್‌ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್ 24/7 ಎಂಬ ಸ್ಥಳೀಯ ಕಂಪನಿಗೆ ಕರೆ ಮಾಡಿದ್ದಾರೆ. ಈ ಸಂಸ್ತೆ ಮನೆಗಳು ಮತ್ತು ಕಚೇರಿಗಳಿಂದ ಹಾವುಗಳನ್ನು ರಕ್ಷಿಸುವಲ್ಲಿ ಪರಿಣತಿ ಹೊಂದಿದೆ. ಹಾವು ಹಿಡಿಯುವವರು ಮಿಲನದಲ್ಲಿ ಮೈಮರೆತಿದ್ದ ದೈತ್ಯ ಹೆಬ್ಬಾವುಗಳನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Video : ಅಡುಗೆ ಮನೆಯ ಸಿಲೆಂಡರ್‌ ಬಳಿಯಿತ್ತು ದೈತ್ಯ ಕಾಳಿಂಗ ಸರ್ಪ!

ಸನ್‌ಶೈನ್ ಕೋಸ್ಟ್ ಸಿಬ್ಬಂದಿ ಹಾವುಗಳ ವಿಡಿಯೋ ಮತ್ತು ಫೋಟೋಗಳನ್ನು ತೆಗೆದಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. "ನಾವು ಬುಡೆರಿಮ್‌ನಲ್ಲಿರುವ ಮನೆಗೆ ಬಂದೆವು, ಅಲ್ಲಿ ಎರಡು ಬೃಹತ್‌ ಗಾತ್ರದ ಹೆಬ್ಬಾವುಗಳು ಅಡುಗೆಮನೆಯ ಮೈಕ್ರೊವೇವ್‌ನ ಹಿಂದೆ ಮಿಲನ ಹೊಂದಿದ್ದನ್ನು ಕಂಡೆವು. ಇವು ಅಡುಗೆಮನೆಯ ತೆರೆದ ಕಿಟಕಿಯ ಮೂಲಕ ಅಲ್ಲಿ ಪ್ರವೇಶಿಸಿರಬಹುದು ಅನಿಸುತ್ತೆ. ನಾವು ಅಲ್ಲಿದ್ದ ಹೆಬ್ಬಾವುಗಳನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟೆವು" ಎಂದು ಪೋಸ್ಟ್‌ ಜೊತೆ ಬರೆದುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News